ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

1)  ಸಕ್ಕರೆ ಉದ್ಯಮವು ಪ್ರಮುಖವಾಗಿ ಕಬ್ಬು ಆಧಾರಿತ ಉದ್ಯಮವಾಗಿದೆ. ಪ್ರಪಂಚದಲ್ಲಿ ಪ್ರಮುಖವಾಗಿ ಕಬ್ಬು ಬೆಳೆಯುವ ಮತ್ತು ಸಕ್ಕರೆ ಉತ್ಪಾದಿಸುವ ದೇಶಗಳೆಂದರೆ:

ಕ್ರ. ಸಂ. ದೇಶ ಪ್ರಪಂಚದ ಒಟ್ಟು ಕಬ್ಬು ಉತ್ಪಾದನೆಯಲ್ಲಿ ಶೇಕಡವಾರು ಪಾಲು ಪ್ರಪಂಚದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಶೇಕಡಾವಾರು ಪಾಲು
1 ಬ್ರೆಝಿಲ್ 40% 21.4%
2 ಭಾರತ 18% 15.8%
3 ಚೀನಾ 6.5% 7.7%
4 ಥೈಲ್ಯಾಂಡ್ 5.0% 6.1%

 

ಈ ದೇಶಗಳ ಪೈಕಿ ಪ್ರಥಮ ಸ್ಥಾನದಲ್ಲಿ ಬ್ರೆಝಿಲ್, ದ್ವಿತೀಯ ಸ್ಥಾನದಲ್ಲಿ ಭಾರತ ಹಾಗೂ ತೃತೀಯ ಸ್ಥಾನದಲ್ಲಿ ಚೀನಾ ಇದ್ದು, ಇವು ಮುಂಚೂಣಿಯಲ್ಲಿರುವ ದೇಶಗಳಾಗಿವೆ. ಸಕ್ಕರೆಯು ಸಾಮಾನ್ಯವಾಗಿ ಮಾನವನ ದೈನಂದಿನ ಆಹಾರ ಪದಾರ್ಥಗಳ ಮತ್ತು ಪಾನೀಯಗಳ ಮೂಲಕ ಬಳಕೆಯಾಗುತ್ತಿದೆ. ಪ್ರಪಂಚದಲ್ಲಿ ವಾರ್ಷಿಕ ಸರಿ ಸುಮಾರು 1750 ಲಕ್ಷ  ಮೆ. ಟನ್ ಸಕ್ಕರೆ ಉತ್ಪಾದನೆ ಆಗುತ್ತಿದ್ದು ಇದರ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಭಾರತ ಮತ್ತು ಚೀನಾ ದೇಶಗಳಲ್ಲಿ ಕಂಡು ಬರುತ್ತದೆ.

2) ಪ್ರಪಂಚದ ಒಟ್ಟಾರೆ ಚಿತ್ರಣದಲ್ಲಿ ಭಾರತ ದೇಶ ಕಬ್ಬು ಬೆಳೆಯುವುದರಲ್ಲಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ 2ನೇ ಸ್ಥಾನವನ್ನು ಹೊಂದಿದೆ. ದೇಶದಲ್ಲಿ ಪ್ರಮುಖವಾಗಿ ಕಬ್ಬು ಬೆಳೆಯುವ ಮತ್ತು ಸಕ್ಕರೆ ಉತ್ಪಾದಿಸುವ ರಾಜ್ಯಗಳೆಂದರೆ: 1) ಉತ್ತರ ಪ್ರದೇಶ, 2) ಮಹಾರಾಷ್ಟ್ರ, 3) ಕರ್ನಾಟಕ, 4) ತಮಿಳುನಾಡು, 5) ಬಿಹಾರ, 6) ಗುಜರಾತ್, 7) ಹರಿಯಾಣ, 8) ಆಂಧ್ರ ಪ್ರದೇಶ, 9) ಪಂಜಾಬ್, 10) ಉತ್ತರಖಾಂಡ. ಈ ರಾಜ್ಯಗಳ ಪೈಕಿ ಕಬ್ಬು ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದ್ದರೆ, ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರವು ಪ್ರಥಮ ಸ್ಥಾನದಲ್ಲಿದೆ. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ತೃತೀಯ ಸ್ಥಾನ ಕರ್ನಾಟಕ ರಾಜ್ಯಕ್ಕೆ ಇರುತ್ತದೆ. ದೇಶದಲ್ಲಿ ಒಟ್ಟು 526 ಸಕ್ಕರೆ ಕಾರ್ಖಾನೆಗಳು ಕಾರ್ಯಾಚರಣೆಯಲ್ಲಿದ್ದು ಇವುಗಳು ವಾರ್ಷಿಕವಾಗಿ ಸರಾಸರಿ ಉತ್ಪಾದಿಸುವ ಸಕ್ಕರೆ ಪ್ರಮಾಣವು 250-280 ಲಕ್ಷ ಮೆ. ಟನ್ ಇರುತ್ತದೆ. ಉತ್ಪಾದನೆಯಾಗುವ ಸಕ್ಕರೆಯಲ್ಲಿ ಸುಮಾರು ಶೇ.12 ರಿಂದ 15 ರಷ್ಟು ಸಕ್ಕರೆಯನ್ನು ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಉಳಿದ ಸಂಪೂರ್ಣ ಉತ್ಪಾದನೆಯು ಸ್ಥಳೀಯವಾಗಿ ಬಳಕೆಯಾಗುತ್ತಿದೆ.

3) ಕರ್ನಾಟಕ ರಾಜ್ಯವು ದೇಶದಲ್ಲಿ ಕಬ್ಬು ಬೆಳೆಯುವುದರಲ್ಲಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ 3ನೇ  ಸ್ಥಾನದಲ್ಲಿರುತ್ತದೆ. ದೇಶದ ಒಟ್ಟು ಸಕ್ಕರೆ ಉತ್ಪಾದನೆಯ ಶೇ.16 ರಷ್ಟನ್ನು ಕರ್ನಾಟಕ ರಾಜ್ಯ ಉತ್ಪಾದಿಸುತ್ತಿದೆ. ರಾಜ್ಯದಲ್ಲಿ ಆಂತರಿಕವಾಗಿ ಸಕ್ಕರೆ ಬಳಕೆಯ ಪ್ರಮಾಣವು ಸುಮಾರು 25 ರಿಂದ 28 ಲಕ್ಷ ಮೆ. ಟನ್ ಆಗಿರುತ್ತದೆ. ರಾಜ್ಯದಲ್ಲಿ ಒಟ್ಟು 83 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, ಇವುಗಳ ಪೈಕಿ 65 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿವೆ.

 

ವಲಯವಾರು ಸಕ್ಕರೆ ಕಾರ್ಖಾನೆಗಳ ವಿವರ  ಕೆಳಕಂಡಂತಿದೆ.

ಕ್ರ. ಸಂ. ವಲಯ ಕಾರ್ಯನಿರತ ಸ್ಥಗಿತ ಸಮಾಪನೆ ಒಟ್ಟು
1 ಸಾರ್ವಜನಿಕ 01 01 - 02
2 ಜಂಟಿ ವಲಯ - - 01 01
3 ಸಹಕಾರಿ ವಲಯ 13 03 05 21
4 ಸಹಕಾರಿ ವಲಯ (ಗುತ್ತಿಗೆ) 06 01 - 07
5 ಖಾಸಗಿ ವಲಯ 45 05 - 50
  ಒಟ್ಟು 65 10 06 81

ಇತ್ತೀಚಿನ ನವೀಕರಣ​ : 16-10-2019 02:53 PM ಅನುಮೋದಕರು: Joint Director


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080