ಅಭಿಪ್ರಾಯ / ಸಲಹೆಗಳು

​ಕಬ್ಬು ನಿಯಂತ್ರಣ ಮಂಡಳಿ

ರಾಜ್ಯ ಸರ್ಕಾರವು ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ 2013 ಮತ್ತು ತಿದ್ದುಪಡಿ ಅಧಿನಿಯಮ 2014ರ ಕಲಂ 3ರ ಅಡಿಯಲ್ಲಿ ಕಲ್ಪಿಸಲಾಗಿರುವ ಅವಕಾಶಗಳಂತೆ ವಹಿಸಲಾದಂತಹ ಕರ್ತವ್ಯಗಳು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸಲು ಕಬ್ಬು ನಿಯಂತ್ರಣ ಮಂಡಳಿಯನ್ನು ರಚಿಸಲಾಗಿದೆ. ಮಂಡಳಿಯ ಕೇಂದ್ರ ಸ್ಥಾನವು ಬೆಂಗಳೂರಾಗಿರುತ್ತದೆ.  ಮಂಡಳಿಯ ಅಧ್ಯಕ್ಷರು/ ಸದಸ್ಯರು ಈ ಕೆಳಕಂಡಂತೆ ಇರುತ್ತಾರೆ.

ಸಕ್ಕರೆ ಸಚಿವರು -  ಅಧ್ಯಕ್ಷರು
ಬಿ ಕೃಷಿ ಸಚಿವರು -  ಸದಸ್ಯರು
ಸಿ ಸಹಕಾರ ಸಚಿವರು
  • ಸದಸ್ಯರು
ಡಿ ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ
  • ಸದಸ್ಯರು
ಸರ್ಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ
  • ಸದಸ್ಯರು
ಎಫ್ ಕೃಷಿ ಆಯುಕ್ತರು
  • ಸದಸ್ಯರು
ಜಿ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ
  • ಸದಸ್ಯರು
ಹೆಚ್ ಕಬ್ಬು ಬೆಳೆಗಾರರ ಪೈಕಿಯಿಂದ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದ ಐದಕ್ಕೆ ಮೀರದಷ್ಟು ಪ್ರತಿನಿಧಿಗಳು (ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಬೆಂಗಳೂರು ಪ್ರತಿ ಕಂದಾಯ ವಿಭಾಗದಿಂದ ಕನಿಷ್ಟ ಒಬ್ಬ ಸದಸ್ಯರು)
  • ಸದಸ್ಯರು
ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವವರ ಪೈಕಿ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದ 5ಕ್ಕೆ ಮೀರದಷ್ಟು ಪ್ರತಿನಿಧಿಗಳು (ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಬೆಂಗಳೂರು ಪ್ರತಿ ಕಂದಾಯ ವಿಭಾಗದಿಂದ ಕನಿಷ್ಟ ಒಬ್ಬರು ಹಾಗೂ ಅವರಲ್ಲಿ ಕನಿಷ್ಟ ಇಬ್ಬರು ಸಹಕಾರಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು)
  • ಸದಸ್ಯರು
ಜೆ ನಿರ್ದೇಶಕರು, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ
  • ಸದಸ್ಯರು
ಕೆ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದ ಧಾರವಾಡ ಅಥವಾ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಪ್ರಾಧ್ಯಾಪಕ ವೃಂದದ ಒಬ್ಬ ಕೃಷಿ ಹಣಕಾಸು ತಜ್ಞರು
  • ಸದಸ್ಯರು
ಎಲ್ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು
  • ಸದಸ್ಯ ಕಾರ್ಯದರ್ಶಿ

 

ಮಂಡಳಿಯ ಸಭೆಗಳ ನೋಟೀಸು, ಸಭೆಯ ಸ್ಥಳ, ಕೋರಂ ಹಾಗೂ ಮಂಡಳಿಯ ಕಾರ್ಯಕಲಾಪಗಳಿಗೆ ಸಂಬಂಧಿಸಿದ ಕಾರ್ಯವಿಧಾನವು ನಿಯಮಿಸಬಹುದಾದಂತೆ ಇರತಕ್ಕದ್ದು.

ಸರ್ಕಾರೇತರ ಸದಸ್ಯನು ನಾಮನಿರ್ದೇಶನಗೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಯವರೆಗೆ ಸದಸ್ಯತ್ವನ್ನು ಹೊಂದಿರುತ್ತಾರೆ. ಮಂಡಳಿಗೆ ಒಮ್ಮೆ ನಾಮ ನಿರ್ದೇಶನಗೊಂಡ ಸದಸ್ಯನು ಎರಡನೇ ಬಾರಿಗೆ ಮರು ನಾಮನಿರ್ದೇಶಿತನಾಗಲು ಅರ್ಹನಾಗುವುದಿಲ್ಲ.

ಮಂಡಳಿಯ ಪ್ರಕಾರ್ಯಗಳು:

   ಎ) ಕಾರ್ಖಾನೆಗಳ ಅಧಿಬೋಗದಾರ ಹಾಗೂ ಕಬ್ಬು ಬೆಳೆಗಾರರ ನಡುವೆ ಆರೋಗ್ಯಕರ ಸಂಬಂಧಗಳನ್ನು ಕಾಪಾಡಿಕೊಂಡು ಬರುವ ಮಾರ್ಗೋಪಾಯಗಳನ್ನು ಶಿಫಾರಸ್ಸು ಮಾಡುವುದು.

  ಬಿ) ಸರ್ಕಾರ ಅಥವಾ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಮಂಡಳಿಗೆ ಕಳುಹಿಸಿಕೊಟ್ಟಿರುವ ಯಾವುದೇ ವಿಷಯದ ಬಗ್ಗೆ ಅದರಲ್ಲೂ ವಿಶೇಷವಾಗಿ ಕಬ್ಬು  ಖರೀದಿಯ ವಿನಿಯಮದ ಸಂಬಂಧದಲ್ಲಿ           ಸಲಹೆಗಳನ್ನು ನೀಡುವುದು.

   ಸಿ) ಅಧಿನಿಯಮದ ಹಾಗೂ ಅದರ ಮೇರೆಗೆ ರಚಿಸಲಾದ ನಿಯಮಗಳ ಯಾವುದೇ ಉಪಬಂಧಗಳನ್ನು ಉಲ್ಲಂಘಿಸಿದ ಪ್ರಕರಣಗಳನ್ನು ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ   ನಿರ್ದೇಶಕರ ಗಮನಕ್ಕೆ ತರುವುದು ಹಾಗೂ         ಅದನ್ನು ತಡೆಗಟ್ಟಲು ಸಲಹೆಗಳನ್ನು ಮಾಡುವುದು.

   ಡಿ)  ವಿವಿಧ ಪ್ರದೇಶಗಳಲ್ಲಿ ಕಬ್ಬಿನ ತಳಿಗಳನ್ನು ಬೆಳೆಯಲು ಸೂಕ್ತವಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.

   ಇ) ಕಬ್ಬು ಅಭಿವೃದ್ಧಿ ಕಾರ್ಯದಲ್ಲಿ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರಿಗೆ ಸಲಹೆ ನೀಡುವುದು.

ಎಫ್)  ಸಕ್ಕರೆ, ಕಬ್ಬಿನ ಸಿಪ್ಪೆ, ಕಾಕಂಬಿ ಮತ್ತು ಪ್ರೆಸ್‍ಮಡ್‍ಗಳಿಂದ ಬರುವ ಆದಾಯವನ್ನು ಪರಿಗಣನೆಗೆ ತೆಗೆದುಕೊಂಡು ಆದಾಯ ಹಂಚಿಕೆ ಸೂತ್ರದ ಆಧಾರದ ಮೇಲೆ ಕಬ್ಬಿನ ಬೆಲೆಯನ್ನು ನಿರ್ಧರಿಸುವುದು.

ಇತ್ತೀಚಿನ ನವೀಕರಣ​ : 05-02-2020 01:54 PM ಅನುಮೋದಕರು: Joint Director


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080